Monday, July 05, 2010

Madhuvana Karedare - Inti Ninna Preetiya

ಮಧುವನ ಕರೆದರೆ ತನುಮನ ಸೆಳೆದರೆ ಶರಣಾಗು ಆದರೆ....(೨)
ಬಿರುಗಾಳಿಯಲ್ಲಿ ತೇಲಿ ಹೊಸ ಗಳಿಗೆ
ಬಂದಿದೆ
ಕನಸೊಂದು ಮೈಮುರಿದು ಬಾ ಬಳಿಗೆ
ಎಂದಿದೆ
ಶರಣಾಗು......ಆದರೆ.....ಸೆರೆಯಾಗು.....ಆದರೆ
ಮಧುವನ.....(೨)

ಆ ಆ ಆ..ಕಂಗಳಲ್ಲಿ
ಕನಸಿನ ಕುಲುಮೆ ಹೊಳೆಯುತ್ತಿದೆ ಜೀವದ ಒಲುಮೆ
ಬೆಳಕಲಿ ನೋಡು ಆದರೆ
ಮೈಯಲ್ಲಾ ಚಂದ್ರನ ಗುರುತು
ಹೆಸರೆಲ್ಲೋ ಹೋಗಿದೆ ಮರೆತು
ನಾನ್ಯಾರೋ ಹೇಳು ಆದರೆ......
ಮಧುವನ.....(೨)

ಮನಸ್ಸಿನ ಹಸಿ ಬಣ್ಣಗಳಲ್ಲಿ
ನೀನೆಳೆವ ರೇಖೆಗಳಲ್ಲಿ
ನಾ ಮೂಡಬೇಕು ಆದರೆ..... ಎ ಎ ಎ
ಎದುರಿದ್ದು ಕರೆಯುವೇ ಏಕೆ
ಜೊತೆಯಿದ್ದು ಮರೆಯುವೆ ಏಕೆ
ನಿನ್ನೊಲವು ನಿಜವೇ ಆದರೆ ...... ಎ ಎ ಎ
ಮಧುವನ ಕರೆದರೆ ತನುಮನ ಸೆಳೆದರೆ ಶರಣಾಗು ಆದರೆ....(೨)

ಬಿರುಗಾಳಿಯಲ್ಲಿ ತೇಲಿ ಹೊಸ ಗಳಿಗೆ ಬಂದಿದೆ
ಕನಸೊಂದು ಮೈಮುರಿದು ಬಾ ಬಳಿಗೆ ಎಂದಿದೆ
ಶರಣಾಗು......ಆದರೆ.....ಸೆರೆಯಾಗು.....ಆದರೆ
ಮಧುವನ.....(೨)